ಬಚ್ಛೇಂದ್ರಿಪಾಲ್
	1954 - .	ಎವರೆಸ್ಟ್ ಶಿಖರವನ್ನು ಏರಿದ ಪ್ರಪ್ರಥಮ ಭಾರತೀಯ ಮಹಿಳೆ. ಉತ್ತರಾಂಚಲದ ಉತ್ತರ ಕಾಶಿಯ ಬೆಟ್ಟ ಗುಡ್ಡಗಳಲ್ಲಿರುವ ನಾಕೂರಿ ಎಂಬ ಪುಟ್ಟ ಗ್ರಾಮದಲ್ಲಿ ಮೇ 24ರಂದು ಜನಿಸಿದ ಈಕೆ ಬಾಲ್ಯದಲ್ಲಿಯೇ ಪರ್ವತಾರೋಹಣದ ಗೀಳು ಬೆಳೆಸಿಕೊಂಡವರು.  `ನೆಹರು ಪರ್ವತಾರೋಹಣ ಸಂಸ್ಥೆ ಯಲ್ಲಿ ತರಬೇತಿ ಪಡೆಯುವಾಗಲೇ ಅಲ್ಲಿನ ಶಿಕ್ಷಕರು ಈಕೆಯ ಸಾಮಥ್ರ್ಯವನ್ನು ಗುರುತಿಸಿದ್ದರು. ಮುಂದೆ ಪರ್ವತಾರೋಹಣದಲ್ಲಿ ಉನ್ನತ ತರಬೇತಿ ಪಡೆದ, ಬಚ್ಚೇಂದ್ರಿಪಾಲ್, ಹಲವಾರು ಶಿಖರಗಳನ್ನು ಯಶಸ್ವಿಯಾಗಿ ಏರಿದರು.  ಮೇ 23, 1984ರಂದು ಎವರೆಸ್ಟ್ ಶಿಖರವನ್ನೇರಿದ ವಿಕ್ರಮಗೈದರು. ಆನಂತರ ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಷನ್‍ಅನ್ನು ಸ್ಥಾಪಿಸಿ ಹಲವು ಪರ್ವತಾರೋಹಣ ಹಾಗೂ ಚಾರಣ ಕಾರ್ಯಕ್ರಮಗಳನ್ನು ನಡೆಸುತ್ತಾ ಅನೇಕ ಯುವ ಪ್ರತಿಭೆಗಳಿಗೆ ಸ್ಪೂೀರ್ತಿಯಾಗಿದ್ದಾರೆ. ಇವರ ಸಾಧನೆಗಳ ಫಲವಾಗಿ ಭಾರತ ಪರ್ವತಾರೋಹಣ ಸಂಸ್ಥೆಯ ಚಿನ್ನದ ಪದಕ ಪುರಸ್ಕøತರಾದ ಇವರಿಗೆ ಭಾರತ ಸರ್ಕಾರ, `ಪದ್ಮಶ್ರೀ ಮತ್ತು `ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.
								(ಬಿ.ವಿ.ಪ್ರಕಾಶ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ